ಭಾವನೆಗಳೊಡನಾಟ ಕಾಣದಿಹುದು
ಮನದ ಮೂಲೆಯ ವಿರಹ ಮೌನವಾಗಿಹುದೀಗ
ನಿನ್ನ ಪ್ರೀತಿಯೆ ಎಲ್ಲೂ ಕಾಣುತಿಹುದು
ನನ್ನ ಮನದಂಗಳದಿ ಪುಟ್ಟ ಗುಡಿಸಲು ಕಟ್ಟಿ
ನಿನ್ನ ಪೀಠದೊಳಿಟ್ಟು ಪೂಜಿಸುವೆನೆ
ಕಾಣದಿಹ ಲೋಕದಲಿ ಮನದ ಸೌರಭ ಕಟ್ಟಿ
ಕಣ್ಣ ತುದಿಯಲ್ಲಿಟ್ಟು ಪ್ರೀತಿಸುವೆನೆ..
ನಿನ್ನಿಂದ ಅಸ್ತಿತ್ವ ನಿನ್ನಿಂದಲೇ ಸತ್ವ
ನನ್ನ ಬದುಕಿನ ಜೀವ ಜ್ಯೋತಿ ನೀನು..
ಕಾಣದಾ ತೀರದಲಿ ಶರಧಿ ದಾಟಿಸಬಲ್ಲ
ಗುರಿಯ ಸೇರಿಸಬಲ್ಲ ದೋಣಿ ನೀನು..
-ಶಿವಪ್ರಸಾದ ಭಟ್ಟ
