ಅವಳಿಲ್ಲದ ಸಂಜೆಯಲಿ ಅವಳದೇ
ನೆನಪು
ಇರುವಾಗ ಬಾರದವಳು ಈಗೇಕೆ
ಬಂದಳೊ..
ಭಾವನೆಗಳೆಡೆ ನನ್ನ ಒಯ್ಯುತಿಹಳು..
ಹೋಗದಿರು ಗೆಳತಿ ಮತ್ತೆ...
ನಾನೇ ನೀನಾಗಿರುವಾಗ..
ನಿನ್ನೊಳಗೇ ಅವಿತಿರುವಾಗ...
ಮುಗಿಲಿನ ಕಡೆ ತಲೆ ಎತ್ತಿದರೂ
ಹೊಳೆವ ನಿನ್ನ ಮುಖದ ಛಾಯೆ.
ರೌದ್ರತೆಯ ಬಾನಿನಲೂ ಎಡೆಬಿಡದೆ
ಕಾಣುತಿದೆ
ನಿನ್ನ ಪ್ರೀತಿಯ ಒಲುಮೆ
ಮಾಯೆ
ಯಾಕೆ ಕಾಡುವೆಯೇ
ಬಹುವಾಗಿ ನನ್ನನ್ನು
ನಾನೇನ ಮಾಡಿರುವೆ..???ಪ್ರೀತಿ
ಬಿಟ್ಟು...
ಉಸಿರಲ್ಲಿ ಉಸಿರಾಗಿ ಜೊತೆಯಲ್ಲೇ
ಇರುವೆ..
ನನ್ನೊಡನೆ ಇರುವ ಕುರುಹೇನೆ?
ನೀ ಇರುವ
ನೆನಪುಗಳೇ ಮನದ ಅಂಗಳದಲ್ಲಿ
ಅಲೆದಾಡುತಿವೆ ಗೆಳತಿ..
ನನ್ನುಸಿರ ಬಿಸಿಗಾಳಿ ನಿನ್ನ
ಸೋಕುವ ಮುನ್ನ
ಬಂದುಬಿಡೆ ಇಂದು..ಹೋಗದಿರು
ಎಂದೂ...
No comments:
Post a Comment