ಮೊನ್ನೆ ಸಿರಸಿಯಲ್ಲಿ ಸಿಕ್ಕ ಹಳೆಯ ಸ್ನೇಹಿತ ಮಳೆಯಲ್ಲಿ ನೆನೆಯದೇ ಬಹಳ ಕಾಲವಾಯಿತು ಎಂದ ಅರ್ಧ ಗಂಟೆಯಲ್ಲಿಯೆ ಮಳೆ ಶುರು ಆದಗ ಸುಖಾ ಸುಮ್ಮನೆ ಮಳೆ ತರಿಸಿದೆ ಎಂದು ಅವನಿಗೆ ಬಯ್ದಿದ್ದೆ.ಆದ್ರೆ ಬಯಸದ ಮಳೆಯೊಳಗೆ ನೆನೆದು ವಾಪಾಸಾದಾಗ ಮನದ ಹಗುರತೆ ಸ್ವಲ್ಪ ಉಲ್ಲಾಸ ನೀಡಿದ್ದಂತೂ ನಿಜ.ಏನೇ ಇದ್ದರೂ ಈ ಪ್ರೀತಿ,ಈಸಂಜೆ,ಈ ಏಕಾಂತ ಇದಕ್ಕೆಲ್ಲ ಒಳಗಿಂದೊಳಗೇ ಏನೋ ಸಂಬಂಧ ಇರಬಹುದು ಅನ್ನಿಸಿದ್ದಂತೂ ಸುಳ್ಳಲ್ಲ.ಏನಾದರೂ ಮಳೆಯಲ್ಲಿ ನೆನೆದ ಉತ್ಸಾಹದ ನಡುವೆ ಯಾವುದೋ ಏಕಾಂಗಿ ಭಾವ ಕಾಡುತ್ತಿತ್ತು.
ನಿಜವಾಗಿಯೂ ಈ ವಯಸ್ಸೇ ಹೀಗಾ??ಯಾವುದೋ ಹುಮ್ಮಸ್ಸು,ಯಾವುದೋ ಸ್ಪೂರ್ತಿ ಇಲ್ಲದೇ ಏನೂ ಮಾಡುವುದು ಸಾಧ್ಯವೇ ಇಲ್ಲವಾ ಎಂದೆನ್ನಿಸಿಬಿಡುತ್ತದೆ ಕೆಲವೊಮ್ಮೆ. "ಮತ್ತದೇ ಬೇಸರ..ಅದೆ ಸಂಜೆ..ಅದೇ ಏಕಾಂತ.." ಹಾಡು ಕೇಳಿದಾಗಲೆಲ್ಲ ಈ ವಿರಹ ಎಂಬುದು ಪ್ರೇಮಿಗಳಿಗೋಸ್ಕರವೇ ಹೇಳಿ ಮಾಡಿಸಿದ ಸಜೆಯೇನೋ ಎನ್ನಿಸುತ್ತದೆ..ವಯಸ್ಸಿನ ತಪ್ಪೋ ಮನಸ್ಸಿನ ತಪ್ಪೋ ತಿಳಿಯದು.ಅನುಭವಿಸುವ ಮನಸ್ಸುಗಳ ತಳಮಳಗಳ ಬಡಿತಗಳ ಸಪ್ಪಳ ವಿಧಿಗೆ ಕೇಳಿಸುವುದೇ ಇಲ್ಲ.ಮುಂಗಾರು ಪ್ರಾರಂಭ ಆದೊಡನೆ ಪ್ರೀತಿಯ ಹುಮ್ಮಸ್ಸಿನಲ್ಲಿ ನೆನೆಯುವ ಭಾವಗಳ ಕೂಗು ಕೇವಲ ಮಳೆಯ ಸದ್ದಿನೊಳಗೇ ಅಡಗಿಹೋಗುತ್ತದೆ.ಭಾವ ಹುಟ್ಟುವುದೂ ಮಳೆಯೊಳಗೇ..ಕೆಲವೊಮ್ಮೆ ಸಾಯುವುದೂ ಮಳೆಯೊಳಗೇ.ಪ್ರೀತಿಸಿದ ಮನದ ಪ್ರೀತಿಯ ಸ್ವರ ಎಲ್ಲಿಯೂ ಶಾಂತತೆ ಮೀರುವುದಿಲ್ಲ.
ಯಾವುದೊ ಭಾವಗಳ ತೊಳಲಾಟದಲ್ಲಿ ಸಿಲುಕಿ ಪ್ರೀತಿ ಎಂಬ ಸಾಂತ್ವನದ ಗೂಡಿನೊಳಗೆ ಕುಳಿತು ನಿಭಾಯಿಸಲಾಗದ ಸಂಕಟಗಳೊಡನೆ ಹೆಣಗಾಡಿ ಸಿನಿಮೀಯ ಶೈಲಿಯಲ್ಲಿ 'ದೇವದಾಸ್' ಎಂದು ಮದ್ಯದ ಮೊರೆ ಹೋಗುವ ಇಂದಿನ ಪೀಳಿಗೆಯ ಪ್ರೀತಿಯ ವರ್ಣನೆ ಕೆಲವೇ ಮಾತುಗಳಿಗೇ ಸೀಮಿತ.ಕೆಲವೊಮ್ಮೆ ಕಾರಣವಿಲ್ಲದ ಹುಸಿಮುನಿಸಿಗೇ ಪ್ರೀತಿಯ ಕೊನೆಯಾಗುತ್ತದೆ.ಅವಳದೇ ನೆನಪು,ಅವಳಿಗೊಸ್ಕರ ಬರೆದ ಕವಿತೆಯ ಸಾಲುಗಳು,ಅವಳಿಲ್ಲದೇ ಇಲ್ಲದ ಜೀವನದ ಕಲ್ಪನೆ,ಇವೆಲ್ಲ ಹರೆಯದ ಹುಡುಗರ ಮನಸ್ಸಿನ ಭೀತಿಯ ಚಿಲುಮೆಗಳು.ಏರಿಳಿಯುವ ಹೃದಯದ ಪ್ರತಿ ಬಡಿತದಲ್ಲೂ ಅವಳ ನೆನಪೇ ಕೊರೆದಿರುವಾಗ ಮನಸ್ಸಿನ ಕಾರಂಜಿಯ ಬುಗ್ಗೆ ಅಳತೆ ಮೀರಿರುವುದಂತೂ ನಿಜ.
ಈ ಪ್ರೀತಿ ನಿಜವೋ ಸುಳ್ಳೋ ಎಂದು ಸಮರ್ಥಿಸುವ ಕೆಲಸ ಮೂಢತೆಯ ಪರಮಾವಧಿಯೇ ಸರಿ.ಏಕೆಂದರೆ ಪ್ರೀತಿಸುವವನಿಗೆ ಪ್ರೀತಿ ಪ್ರೀತಿಯೇ..ಪ್ರೀತಿ ವಂಚಿತನ ಬಾಳಿನಲ್ಲಿ ಕೊರಗುವ ಭೀತಿಯೇ.ಒಂದರ್ಥದಲ್ಲಿ ಬಣ್ಣ ಬದಲಾಯಿಸುವ ಊಸರವಳ್ಳಿ..ಅರಿತವರ ಪ್ರೀತಿಯ ಪರಿಯ ಪ್ರಹಾರದ ಆಘಾತದ ಚೇತರಿಕೆ ಅಸಾಧ್ಯ.ಮಳೆಯ ನೆನೆವ ನೆನಪುಗಳೊಡನೆ ಪ್ರೀತಿಯ ಅಸ್ತಿತ್ವ ಶಾಶ್ವತವಾಗದಿಲ್ಲ.ಬಹುಶಃ ಮೊನ್ನೆ ನಾನನುಭವಿಸಿದ ಒಂಟಿತನ ಕೆಲವರಾದರೂ ಅನುಭವಿಸಿರಬಹುದು.ಆದರೆ ನನಗೇಕೆ ಆ ಭಾವ ಕಾಡಿತು ಎಂಬುದನ್ನು ಗುರುತಿಸಲು ಆಗದೇ ಇದ್ದೇನೆ.ಆದರೆ ಆ ಮಳೆಯ ಸೆಳೆತದ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ.ಪ್ರೀತಿಸುವ ಘಳಿಗೆಯಲ್ಲಿ ಕಾಯುವ ನೆನಪುಗಳು ಸುರಿವ ಮಳೆಯಲ್ಲಿ ನೆನೆದಾಗ ನೀರಾಗಿ ಇಳಿದಿರುತ್ತವೆಯೇನೋ....!!!!ಕೆಲವೊಮ್ಮೆ ಮಳೆಯಲ್ಲಿ ನೆನೆದಾಗ ಕಣ್ಣೀರೂ ಸಹ ಮಳೆಯೊಡನೆ ಬೆರೆತಿರುತ್ತದೆ.ಅವಳ ಬರುವಿಕೆಗಾಗಿ ಕಾಯುವ ಸಂದರ್ಭದಲ್ಲಿ ಬರುವ ಮಳೆ ಸತ್ತ ಮನೆಗೆ ಸಾಂತ್ವನಕ್ಕೆ ಬಂದಂತೆ ಎಂಬ ಅತಿಶಯೋಕ್ತಿಯಾಗಿಬಿಡುತ್ತದೆ.ತನುವು ನಿನ್ನದು ಮನವು ನಿನ್ನದು ಎಂಬ ಹುಮ್ಮಸ್ಸಿನೊಂದಿಗೆ ಪ್ರೀತಿಸಲು ಆರಂಭಿಸಿದ ಹೃದಯಗಳ ಕನಸಿನ ಗೋಡೆ ಉರುಳಿದಾಗ ತಳಪಾಯದ ಮೃದುತ್ವ ನೆನೆದಿರುವುದೇ ಕಾಣುತ್ತದೆ.ಸಣ್ಣ ಸಣ್ಣ ವಿಶಯಗಳ ಭಿನ್ನ ನಿಲುವುಗಳು ಇಂದಿನ ಪ್ರೀತಿಯ ಬುಡಕ್ಕೆ ಕೊಡಲಿಕಾವು.ಬರೆಯದ ಕವಿತೆಯ ಹೊಸ ಸಾಲುಗಳೇ ಹೃದಯದಲ್ಲಿ ಜಿನುಗುತ್ತಿರುವಾಗ ಕಾಣದ ಮನಸ್ಸಿನ ವೇದನೆಗೆ ಮನಸ್ಸು ಕೈಗನ್ನಡಿಯಾಗದೇ ಇದ್ದೀತೆ??
ಜೀವನದಲ್ಲಿ ಪ್ರೀತಿಯ ಉತ್ಸಾಹಿಗಳಿಗೆ ಕಾಣುವುದು ಕೇವಲ ಪ್ರೀತಿಯೊಂದೇ.ಸಾಧನೆಯ ಶಿಖರದ ಉನ್ನತಿಯಲ್ಲಿನ ಪ್ರೀತಿಯ ಹಕ್ಕಿಯ ಜೊತೆಗೂಡಿ ಹಾರುವ ಹುಮ್ಮಸ್ಸಿನಲ್ಲಿ ವೈಮನಸ್ಸುಗಳ ಕೊಲೆಗೈಯುವ ಮನಸ್ಥಿತಿಯ ಅರಿವೇ ಇರುವುದಿಲ್ಲ.ಸಂಜೆ,ಏಕಾಂತ,ಮಳೆಗಳ ಭಾವನೆಗಳಲ್ಲಿ ತಲ್ಲೀನವಾಗುವ ಜೀವಗಳಿಗೆ ಜೀವನದ ಹೊಸ ಸೂರ್ಯೋದಯದ ಕನಸಿನ ದಾರಿಯ ಪರಿವೆಯೇ ಇರುವುದಿಲ್ಲ.ಹೀಗಾಗಿ ಸಾಧನೆಯ ಹಿಂದಿನ ಅವಳ ಸ್ಪೂರ್ತಿ ಎಲ್ಲಕ್ಕಿಂತ ಮಿಗಿಲಾಗಿರುತ್ತದೆ.ಪ್ರೀತಿಯ ಪರಿಧಿಯ ಪರಿವೆಯಿರುವ ಯಾವ ಪ್ರೇಮಿಯೂ ಪ್ರೀತಿಯಿಲ್ಲದ ಬದುಕನ್ನು ಊಹಿಸಲಾರ.ಹೀಗಾಗೇ ಮಳೆ,ಸಂಜೆ,ಏಕಾಂತಗಳ ಪ್ರೀತಿಯ ಅರ್ಥ ಬಹುವಾಗಿರಬಹುದು..ಹೃದಯದ ಪ್ರೀತಿಯ ಸೆರೆಮನೆಯೊಳಗೆ ಭಾವದ ಬಂಧಿಯಾಗುವ ಪ್ರತಿಯೊಬ್ಬನ ಅಂತರಂಗವೂ ಮುಂಗಾರು ಮಳೆಯ ನೆನೆಯುವಿಕೆ ಬಯಸುತ್ತದೆ.
ಪ್ರೀತಿ ಎಂಬ ಪದದ ನಿಜವಾದ ಅರ್ಥ ಅರಿತ ಮಹಾಶಯ ನಿಜವಾದ ಪ್ರೀತಿಯನ್ನು ಗೌರವಿಸುತ್ತಾನೆ.ಭಾವನೆಗಳ ಬಲೆಯಿಂದ ಬದುಕಿ ಬರುವ ಆಸೆ ಕಮರಿಹೋಗುತ್ತದೆ.ಏನೇ ಆದರೂ ನಾನು ಇದರಲ್ಲಿ ಅನನುಭವಿ.ಪ್ರೀತಿ ಅರ್ಥೈಸಿಕೊಡವನಾಗಿ ಪ್ರೀತಿಗಾಗಿ ಕೆಲವು ಸಾಲು ಬರೆಯಬಹುದು.."ಮನಸೂ ನಿನ್ನದೆ..ಕನಸೂ ನಿನ್ನದೆ..ಕರಗದಿರಲಿ ಪ್ರೀತಿ...ಕಾಣದ ಕನಸಿನ ನನಸೂ ನಿನ್ನದೆ..ಮೂಡದಿರಲಿ ಭೀತಿ......!!!!"
-ಶಿವಪ್ರಸಾದ ಭಟ್ಟ
Super :)
ReplyDeleteಮುಂಗಾರು ಮಳೆಯ ಸೆಳೆತಕೆ, ಅಂತರಂಗ ಮಾತನಾಡಿದಾಗ...
ReplyDeletesanje,male mattu preeti..ee mooru shabdagalu,ee 3 vishayagalu endendoo battada toreyante..moorannoo ittukondu ondakkondu sambandha beseyuva prayatna chennaagide..uttama bareha...keep it up :)
ReplyDelete