ನಿನ್ನ ನೋಡಬೇಕು ನಾನು ಎಲ್ಲಿಹೆ ?
ನೋಡಿ ಕೇಳಬೇಕು ಈಗ ಹೇಗಿಹೆ ?
ಅತಿಯಾಯಿತು ನಿನ್ನ ನೆನಪು
ಮನಸಿನ ಯಾತನೆ ತಿಳಿಸಲು ಆಗದೆ
ಕಾಯುತ ಕುಳಿತಿಹೆ ಕಾಣಲಾರೆಯಾ?
ದಿನ ರಾತ್ರಿ ಕನಸಲ್ಲಿ ನೀ ಬಂದ ತರುವಾಯ
ನಾ ಕಳೆದು ಹೋಗಿರುವೆ ...ನಾನೀಗ ನಿರುಪಾಯ
ಮಾತನಾಡು ನಾನು ಕಂಡ ಆ ಕ್ಷಣ
ಮೂಡಿ ಬರಲಿ ನನ್ನ ನೆನಪು ತಕ್ಷಣ
ಮನಸಲ್ಲಿಯೇ ಇರಲಿ ಸ್ಪಂದನೆ
ನಿನ್ನದೇ ನೆನಪಲಿ.....ನಿನ್ನದೇ ಕನಸಲಿ
ನಿನ್ನನೆ ಬಯಸುವೆ.....ಕಾಣಲಾರೆಯಾ
ನನ್ನೆಲ್ಲ ಕನಸುಗಳು ನಿನಗೆಂದೇ ಉಳಿತಾಯ
ನೀ ದೂರ ಮಾಡಿದರೆ ನಾನಂತೂ ನಿರುಪಾಯ
ಮನಸು ನಿನ್ನ ನೆನಪ ತುಂಬಿಕೊಂಡಿದೆ
ಆ ನೆನಪಿನಲ್ಲೇ ಮನಸು ಕಾಣೆಯಾಗಿದೆ
ಹುಡುಕಾಡುತ ಸೋತೆ ನಾನು
ನಿನ್ನೆಡೆ ನನ್ನಯ ಮನಸದು ಬಂದರೆ
ಒಲವಿನ ಭಾವನೆ ಕಾಣಲಾರೆಯಾ
ನನ್ನ ನೆನಪಿನಂಗಳಕೆ ನೀ ಬಂದ ತರುವಾಯ
ಹೃದಯವ ದೋಚಿರುವೆ.....ನಾನಂತೂ ನಿರುಪಾಯ
No comments:
Post a Comment