Sunday, October 14, 2012

ಓಲೆ....


ಶ್ರೀ


ನೀಲ್ಮನೆ
೧೫-೧೦-೨೦೧೨

ಪ್ರೀತಿಯ ಸ್ನೇಹಕ್ಕೆ

     ನಿನ್ನೊಲವಿನ ಹೃದಯದ ಶುಭಾಶಯಗಳು. ನೀನು ‍‍‍‍‍‍‍‍‍‍‍‍‍‍‍‍‍ಕುಶಲವಾಗಿರುವೆ ಎಂದು ಭಾವಿಸುವೆ. ನಾನು ಕುಶವಾಗಿದ್ದೇನೆ. ಸತ್ಯ ಎಂಬುದು ಎಂತಹ ಆಘಾತಕಾರಕ ಅಲ್ಲವೇ? ಕೇವಲ ಒಂದೇ ಒಂದು ಮಾತು ಎರಡು ಹೃದಯಗಳ ಭಾವನೆಗಳನ್ನು ಬೇರೆ ಮಾಡುತ್ತದೆ ಎಂದಾದರೆ ಅದರ ಪ್ರಹಾರದ ಪರಿ ಹೇಗಿರಬೇಡ? ಅಂದು ನಾನಾಡಿದ ಒಂದು ಸತ್ಯ ನಿನ್ನ ಮನಸ್ಸಿನ ಮೇಲೆ ಅಂತಃ ಗಾಢ ಪರಿಣಾಮ ಬೀರಿದೆ ಎಂದಾದರೆ ಮನ್ನಿಸು... ಆದರೆ ನಿನ್ನ ಒಳಿತಿಗಾಗಿ ನಾನು ಹೇಳಲೇ ಬೇಕಿತ್ತು. ಮಂಗಳಕರವಾದರೂ, ಅಮಂಗಳಕರವಾದರೂ ಸ್ನೇಹದ ಪರಾಭವ ಬಯಸದವ ಅಂತಹ ಮಾತು ಹೇಳಲೇಬೇಕೆಂಬ ವಿದುರನ ತತ್ವ ನಂಬಿದವ ನಾನು. ನಿನ್ನ ಅಳಿವನ್ನು ಎಂದೂ ಬಯಸಿದವನಲ್ಲ…..ನೋವಾಗಿದ್ದರೆ ಮನ್ನಿಸು.. ತಿರಸ್ಕರಿಸಬೇಡ...

ಅಂದು ನಾ ಹೇಳಿದ ಮಾತು ನಿನಗೆ ನಾಟಿದೆಯೆಂದು ಭಾವಿಸುವೆ.. ಲೋಕದ ಕಣ್ಣು ಹೇಗಿದ್ದರೂ ತಪ್ಪು ಹುಡುಕುತ್ತದೆ.. ಅದಕ್ಕಾದರೂ ತಿದ್ದಿಕೊಳ್ಳಲೇ ಬೇಕು.. ಏನೇ ಇರಲಿ... ಸತ್ಯದ ಪ್ರಭಾವ ಅರಿವಾಯಿತು.. ಕೇವಲ ಪುಸ್ತಕಗಳಲ್ಲಿ ಸತ್ಯದ ಮಹತ್ವ ಪ್ರಾಯೋಗಿಕವಾಯಿತು.. ಬಹುಷಃ ನಾನು ನನ್ನ ಜೀವನದುದ್ದಕ್ಕೂ ಮರೆಯಲಾಗದ ಘಟನೆಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆಯಾಯಿತು... ಆದರೂ ನನ್ನ ಉದ್ದೇಶವನ್ನು ಗಮನದಲ್ಲಿರಿಸಿ ಮನ್ನಿಸುವೆ ಎಂದು ಭಾವಿಸುವೆ.. ಏನೆ ಇರಲಿ.. ಇದರಿಂದ ಒಂದು ಮರೆಯಲಾಗದ ಪಾಠ ಕಲಿತೆ.. "ಸತ್ಯ ಸಂಬಂಧಗಳನ್ನು ಕೆಡಿಸುತ್ತದೆ"...ಆದ್ದರಿಂದ ಇನ್ನು ಮುಂದೆ ಸತ್ಯವನ್ನು ಕಡಿಮೆ ನುಡಿಯಲು ಪ್ರಯತ್ನಿಸುತ್ತೇನೆ....
ಇಂತಿ ನಿನ್ನವ
ಶಿವಪ್ರಸಾದ ಭಟ್ಟ
 

No comments:

Post a Comment

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...