Monday, May 6, 2013

ಭಾವನೆ..

ನುಡಿಸಲಾಗದ ಯಾವ ರಾಗಕೋ
ಮನದ ಭಾವವು ಮಿಡಿದಿದೆ..
ನುಡಿಯಲಾಗದ ಯಾವ ಮಾತಿಗೋ
ಎದೆಯ ವೀಣೆಯು ಮೀಟಿದೆ..

ಅವಳ ಹೆಜ್ಜೆಯ ಗೆಜ್ಜೆ ಸದ್ದಿಗೆ
ಮಾತನಾಡಿದೆ ಕತ್ತಲೂ
ಸವಿಯ ದನಿಯನು ಕೇಳಲಾಗದೆ
ಭಾವವಾಗಿದೆ ಬೆತ್ತಲು..

ಮನದ ಮೂಲೆಯ ವಿರಹದಳಿವಿಗೆ
ಜೀವತುಡಿದಿದೆ ಶಾಶ್ವತ
ಮುಳುಗಲಾರದ ಭಾವ ಶರಧಿಗೆ
ಹೃದಯ ಸೋತಿದೆ ಸಂಗತ..

No comments:

Post a Comment

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...