Wednesday, August 23, 2017

ಅವಳು..

ಅವಳಂದರೆ ಬರಿಯ ಅವಳಲ್ಲ..
ನನ್ನೊಳಗಿನ ಭಾವನೆಗಳ ಪ್ರತಿಧ್ವನಿ..
ಪ್ರತಿ ಸಾರಿಯೂ ಬಿಗಿದು ಮುತ್ತಿಡುವ
ನನ್ನದೇ ಕನಸುಗಳ ಸುಪ್ತ ಪ್ರತೀಕ..

ಅವಳೆಂದರೆ ನನ್ನೊಡಲಾಳದ ಗುಪ್ತಗಾಮಿನಿ..
ಹರಿಯುತ್ತಿರುತ್ತಾಳೆ ತೊರೆಯಂತೆ..
ಕಲಕಲ ನಿನಾದ ರಾಗವಾಡುತ್ತದೆ
ನನ್ನೆದೆಯ ಬಡಿತದ ಸಪ್ಪಳದ ತಾಳಕ್ಕೆ..

ಆವಳೆಂದರೆ ನಾನರಿಯದ ಭಾವತರಂಗ..
ಆವರಿಸುತ್ತಾಳೆ ನಾ ನಡೆಯುವ ದಾರಿಯನ್ನೇ..
ಅವಳಿಲ್ಲದ ಸಂಜೆಗಳಲ್ಲಿಯೂ ಅವಳದೇ ಗಮನ
ಮುಗಿಯುವುದೇ ಇಲ್ಲ ಅರೆಘಳಿಗೆಯೂ..

ಅವಳೆಂದರೆ ನಾ ಪ್ರತಿನಿಧಿಸುವ ಪ್ರೀತಿ
ಮೋಹಕ್ಕೂ ಮಮತೆಗೂ ಸಾಕ್ಷಿ ಅವಳೇ..
ಆಗಾಗ ರೀತಿ ರಿವಾಜುಗಳೂ ಕೊನೆಯಾಗುತ್ತವೆ
ಇನ್ನೆಂದೂ ಮುಗಿಯದ ಪಯಣಕಾಗಿ..


2 comments:

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...