ಹಾಗೆ ಬಳಸಿ ಸನಿಹ ನಿಂತು ಪಿಸುನುಡಿದಳು ನನ್ನವಳು,
ಕಣ್ಣ ಸನ್ನೆಯಲ್ಲೇ ಸೆಳೆದು ಮುತ್ತನಿಟ್ಟು ನಾಚಿದಳು!
ಬೊಗಸೆ ಕಣ್ಣ ನೀಲಿ ತುಂಬಾ ಮೂಡಿ ಮತ್ತೆ ನನ್ನ ಬಿಂಬ
ಅಧರ ಮತ್ತೆ ಮೆಲುದನಿಯಲಿ ಮಾತನಾಡಿತು
ಮನಸು ಕೈಯ ಚಾಚಿತು .. ಅವಳ ಬಾಚಿ ತಬ್ಬಿತು
ಅವಳ ಚೆಲುವ ಹೋಲಿಕೆಗಳೂ ಖಾಲಿಯಾಗಿವೆ
ಮತ್ತೆ ಬಾರದಾಗಿವೆ.. ತೀರ ಸೇರದಾಗಿವೆ..
ಅವಳ ಮೌನ ಮಾತನಾಡಿ ಮತ್ತೆ ಕಾಡಿದೆ
ನಿಂತ ಮಳೆಯ ಹನಿಗಳೆಲ್ಲ ನಿನ್ನೆ ಕನಸ ಮತ್ತೆ ಕರೆದು
ಹೃದಯ ಹಸಿರು ಭೂಮಿ ಮತ್ತೆ ಮೆತ್ತಗಾಗಿದೆ
ಅವಳ ಚಿಗುರು ಮೂಡಿದೆ..
ಕಲ್ಪನೆಗಳ ಲೋಕದಲ್ಲಿ ನಿನ್ನೆ ಬಿದ್ದ ಕನಸಿಗೀಗ
ಬಣ್ಣ ಮಾಸಿದೆ.. ಕಪ್ಪು ಬಿಳುಪು ಮೂಡಿದೆ..
ತೋಳು ಮತ್ತೆ ಚಾಚಿದೆ.. ತೆಕ್ಕೆಗೀಗ ರೆಕ್ಕೆ ಮೂಡಿದೆ
ಹಗಲುಗನಸೋ ಮುಗಿಲ ಮುನಿಸೋ
ಮಿಂಚು ಮೂಡಿ ಸಂಚು ಮಾಡಿ
ಅವಳ ಸಹಿಯ ಬಿಳಿಯ ಹಾಳೆ ಖಾಲಿಯಾಗಿದೆ
ಕನಸೂ ಕಾಣೆಯಾಗಿದೆ
-ಶಿವಪ್ರಸಾದ ಭಟ್ಟ
It's realy good bro.....
ReplyDeleteThanks a lot Abhi..
DeleteNice dream...and feelings... Too... Good poem...prasad...
ReplyDeleteThis comment has been removed by the author.
ReplyDeleteIt's really nice dream bro
ReplyDelete